Thursday, 7 November 2013

ಯಕ್ಷಲಹರಿ- ಯುಗಪುರುಷ ತಾಳಮದ್ದಳೆ ಸಪ್ತಾಹ ಉದ್ಘಾಟನೆ

ಯಕ್ಷಗಾನವು ಜನರಲ್ಲಿ ಧಾರ್ಮಿಕ ಚಿಂಚನೆ ಹಾಗೂ ಸಾಹಿತ್ಯಿಕವಾಗಿ ಪ್ರಜ್ಞಾವಂತನಾಗರಿಕರನ್ನಾಗಿ ಮಾಡಿ ಸನ್ಮಾರ್ಗದಲ್ಲಿ ನಡೆಯುವಲ್ಲಿ  ಸಹಕಾರಿಯಾಗಿದೆ. ಕಿನ್ನಿಗೋಳಿ ಗ್ರಾ. ಪಂ. ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು ಹೇಳಿದರು. ಅವರು ಜು. ೨೮ ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ-ಯುಗಪುರುಷ ಕರ್ಣಾಟಕ ಬ್ಯಾಂಕ್ (ಲಿ)ಯಕ್ಷಗಾನ ತಾಳಮದ್ದಳೆ ಸಪ್ತಾಹ ಸಾಹಸೇ ಶ್ರೀಃ ಪ್ರತಿವಸತಿ ಯನ್ನು ಉದ್ಘಾಟಿಸಿ ಮಾತನಾಡಿದರು. ಮಾಜಿ ಲಯನ್ಸ್ ಅಧ್ಯಕ್ಷ ಕೆ. ಮೋಹನದಾಸ ಶೆಟ್ಟಿ ಅಧ್ಯಕ್ಷತೆವಹಿಸಲಿರುವರು. ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು. ಕಸಾಪದ ರಾಜ್ಯಾಧ್ಯಕ್ಷ  ಹರಿಕೃಷ್ಣ ಪುನರೂರು, ಅತ್ತೂರುಬಲು ಮಹಾಗಣಪತಿ ಮಂದಿರದ ವೆಂಕಟ್ರಾಜ ಉಡುಪ, ಲಯನ್ಸ್ ಅಧ್ಯಕ್ಷ  ವೈ. ಕೃಷ್ಣ ಸಾಲ್ಯಾನ್, ಯಕ್ಷಲಹರಿಯ ಉಪಾಧ್ಯಕ್ಷ ಸತೀಶ್ ರಾವ್, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಕೆ. ಮಂಜುನಾಥ ಮಲ್ಯ, ಕರ್ಣಾಟಕ ಬ್ಯಾಂಕ್ ಶಾಖಾಪ್ರಬಂಧಕ ಸದಾನಂದ ಎಸ್, ಬ್ಯಾಂಕ್ ಆಫ್ ಬರೋಡ ಶಾಖೆಯ ಪ್ರಬಂಧಕ ರಮೇಶ್ ಬಿ, ವಿಜಯಾ ಬ್ಯಾಂಕ್ ಶಾಖಾ ಪ್ರಬಂಧಕ ಶಿವಪ್ರಸಾದ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಪ್ರಬಂಧಕ ಬಿ. ಕೆ. ಕುಮಾರ್‌ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು. ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು.  ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಧರ ಡಿ. ಎಸ್ ವಂದಿಸಿದರು.

No comments:

Post a Comment