Tuesday, 20 November 2012

ಯುಗಪುರುಷ ಮತ್ತು ವಿಜಯಾಕಲಾವಿದರು ನೀಡುವ ಎರಡನೆಯ ವರ್ಷದ ಕೆ. ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ

ಸಮಾಜದ ಅವ್ಯವಸ್ಥೆಗಳನ್ನು  ಸರಿಪಡಿಸಲು ಏಕಪಕ್ಷೀಯವಾಗಿರದೆ ಮಾಧ್ಯಮದ ಮೂಲಕ ಸುಸ್ಥಿತಿಗೆ ತರಲು ಪತ್ರಕರ್ತರು ಸದಾ ಶ್ರಮಿಸಬೇಕು. ಪರಿಸರವಾದಿ, ಪತ್ರಕರ್ತ, ಅಂಕಣಕಾರ ಕೆ.ಜೆ.ಶೆಟ್ಟಿ ಅವರು ಯುವ ಪತ್ರಕರ್ತರಿಗೆ ಮಾರ್ಗದರ್ಶಕರು  ಎಂದು ಕ.ಸಾ.ಪ. ಮಾಜಿ ರಾಜಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಅವರು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಭಾನುವಾರದಂದು ನಡೆದ ಯುಗಪುರುಷ ಮತ್ತು ವಿಜಯಾಕಲಾವಿದರು ನೀಡುವ ಎರಡನೆಯ ವರ್ಷದ ಕೆ. ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹೊಸದಿಗಂತ ಉಪಸಂಪಾದಕ ವೃಷಾಂಕ್ ಖಾಡಿಲ್ಕರ್ ಅವರನ್ನು ಕಟೀಲಿನ ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಪ್ರಶಸ್ತಿ ನೀಡಿ ಗೌರವಿಸಿದರು.
ಯುಗಪುರುಷದ  ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ,  ಮುಲ್ಕಿ-ಮೂಡಬಿದ್ರೆ ಶಾಸಕ ಕೆ. ಅಭಯಚಂದ್ರ ಜೈನ್, ಹಿರಿಯ ಸಾಹಿತಿ ಬೋಳ ಚಿತ್ತರಂಜನ್ ಶೆಟ್ಟಿ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಮುಂಬೈನ ಡಿ.ಕೆ. ಕುಂದರ್, ಸಾಹಿತಿ ಸುಮುಖಾನಂದ ಜಲವಳ್ಳಿ, ಮೂಡಬಿದ್ರೆ ನಮ್ಮ ಬೆದ್ರ ಪತ್ರಿಕೆ ಸಂಪಾದಕ ಆಶ್ರಫ್ ವಾಲ್ಪಾಡಿ, ಪ್ರಶಸ್ತಿ ಸಮಿತಿಯ ಸಂಚಾಲಕ ಕೆ.ಜೆ. ಶೆಟ್ಟರ ಪುತ್ರ ಕಡಂದಲೆ ತಾರಾನಾಥ ಶೆಟ್ಟಿ, ಸಾಯಿನಾಥ ಶೆಟ್ಟಿ,  ಸಾಲೆತ್ತೂರು ಜಯರಾಮ ಶೆಟ್ಟಿ  ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಸ್ವಾಗತಿಸಿ, ಲಕ್ಷಣ್ ಬಿ.ಬಿ. ಏಳಿಂಜೆ ವಂದಿಸಿದರು, ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Wednesday, 24 October 2012

ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತಿ




ಧರ್ಮಸ್ಥಳದ ಧರ್ಮಾಧಿಕಾರಿಯವರಾದ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ೪೫ನೇ ಪಟ್ಟಾಭಿಷೇಕದ ವರ್ಧಂತಿ ತಾ.೨೪ರಂದು ಜರಗಿದ ಸಂದರ್ಭದಲ್ಲಿ ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಮೂಡಬಿದ್ರೆಯ ಶ್ರೀಪತಿ ಭಟ್, ನ್ಯಾಯವಾದಿ ಬಾಹುಬಲಿ ಪ್ರಸಾದ್, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಮಂಗಳೂರಿನ ಕೊಟ್ಟಾರಿಯವರು ಮುಖತಃ ಭೇಟಿಯಾಗಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಗ್ರಂಥಾಲಯಕ್ಕೆ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಕೆಲವೊಂದು ಕೃತಿಗಳನ್ನು ಧರ್ಮಾಧಿಕಾರಿಯವರಿಗೆ ಹಸ್ತಾಂತರಿಸಿದರು.

ಉಳೆಪಾಡಿಯಲ್ಲಿ ಶರನ್ನವರಾತ್ರಿ ಧಾರ್ಮಿಕ ಸಭೆ


ನಮ್ಮ ನಾಡಿನ ನುಡಿ ಸಂಸ್ಕಾರ ಆಚರಣೆಗಳನ್ನು ಉಳಿಸಿ ಬೆಳಿಸಿಕೊಳ್ಳಬೇಕು ನಾಡಿನ ಅಭ್ಯುದಯಕ್ಕಾಗಿ ಬದ್ಧರಾಗಬೇಕು ಎಂದು ಮಾಜಿ ಕಸಾಪ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. 
ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನದಲ್ಲಿ ಮಂಗಳವಾರ ನಡೆದ ಶರನ್ನವರಾತ್ರಿ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಸಮಾಜ ಸೇವೆಗಾಗಿ ಶ್ರಮಿಸಿದ ತಾಳಿಪಾಡಿ ಮಠ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಆಡಳಿತ ಮೊಕ್ತೇಸರ ದಯಾನಂದ ಭಟ್,  ಸಮಾಜಸೇವಿಕೆ ಶ್ರೀಮತಿ ಕೇಸರಿ ಪುರಂದರ ಬಳ್ಕುಂಜೆ, ದೈವಾರಾಧಕ ಆನಂದ ಪಾಣಾರ, ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನ ಉಳೆಪಾಡಿ ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ  ಹಾಗೂ ಪಟ್ಟೆ ಭಜನಾ ಮಂಡಳಿಯನ್ನು  ದೇವಳದ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಸಂತೋಷ್ ಕುಮಾರ್ ಬೆಂಗಳೂರು. ಶ್ರೀಮತಿ ಮೋಹನದಾಸ ಸುರತ್ಕಲ್, ಕರುಣಾಕರ ರೈ, ವೈ. ಕೃಷ್ಣ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಉಳೆಪಾಡಿ ದುರ್ಗಾಪರಮೇಶ್ವರೀ ಮಹಮ್ಮಾಯೀ ದೇವಸ್ಥಾನದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶರನ್ನವರಾತ್ರಿ ಆರಾಧನೆ ಪ್ರಯುಕ್ತ ಮಾಹಾ ಚಂಡಿಕಾ ಯಾಗ ನಡೆಯಿತು.  





Thursday, 18 October 2012

ಯುಗಪುರುಷ" ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ



ಕಿನ್ನಿಗೋಳಿ : ಕಳೆದ ೬೬ವರ್ಷಗಳಿಂದ ಕಿನ್ನಿಗೋಳಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ,  ಕರ್ನಾಟಕ ರಾಜ್ಯದ ಮಾಸಪತ್ರಿಕೆಗಳಲ್ಲಿ ಪ್ರಥಮ ಸ್ಥಾನದಲ್ಲಿರುವ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ "ಯುಗಪುರುಷ" ಕನ್ನಡ ಮಾಸ ಪತ್ರಿಕೆಯ ದಸರಾ-ದೀಪಾವಳಿ ವಿಶೇಷಾಂಕವನ್ನು  ಅಕ್ಟೋಬರ್ ೧೭ರಂದು ಗುರುವಾರ ಶ್ರೀ ಕ್ಷೇತ್ರ ಕಟೀಲಿನಲ್ಲಿ  ಕೆ.ಲಕ್ಷ್ಮೀನಾರಾಯಣ ಆಸ್ರಣ್ಣರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ  ವಾಸುದೇವ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಅಜಾರು ನಾಗರಾಜ ರಾಯ, ಗುರುಪುರ ಗೋಳಿದಡಿ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ,  ದೇವಪ್ರಸಾದ ಪುನರೂರು, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉಪಸ್ಥಿತರಿದ್ದರು.

Monday, 2 April 2012

ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲದಿಂದ ಪ್ರಕಟಿತ ಎರಡು ಕೃತಿಗಳ ಬಿಡುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಹಿರಿಯ ಮಕ್ಕಳ ಸಾಹಿತಿ ಪಳಕಳ ಸೀತಾರಾಮ ಭಟ್ ರಚಿಸಿದ ಇಲಿಯೇ ಹೇಳಿದ್ದು ಮತ್ತು ಆಟಿಕೆಗಳ ಕೂಟದಲ್ಲಿ ಕೃತಿಗಳ ಬಿಡುಗಡೆ ಮೂಡುಬಿದ್ರೆ ಸಮಾಜ ಮಂದಿರದಲ್ಲಿ ಜರಗಿತು. ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಯುಗಪುರುಷದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕೃತಿಗಳನ್ನು ಬಿಡುಗಡೆ ಗೊಳಿಸಿದರು.
ಕೃತಿ ಬಿಡುಗಡೆಗೊಳಿಸಿದ ಅವರು ಸಾಹಿತ್ಯದ ಮೂಲಕ ಮಕ್ಕಳ ಮನಸ್ಸನ್ನು ವಿಕಸನಗೊಳಿಸುವ ಸಾಹಿತ್ಯವನ್ನು ರಚಿಸಿರುವ ಪಳಕಳ ಅವರ ಸಾಹಿತ್ಯ ಸಾಧನೆಯನ್ನು ಸರಕಾರ ಗುರುತಿಸಿಲ್ಲ. ಅವರು ಇನ್ನಷ್ಟು ಕೃತಿಗಳನ್ನು ರಚಿಸುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಲಿ ಎಂದರು. ಕೃತಿಕಾರ ಪಳಕಳ ಸೀತಾರಾಮ ಭಟ್ ಮಾತನಾಡಿ ಮಕ್ಕಳ ಸಾಹಿತ್ಯವನ್ನು ಇಂದು ದ್ವಿತೀಯ ದರ್ಜೆಯ ಸಾಹಿತ್ಯವನ್ನಾಗಿ ಪರಿಗಣಿಸಲಾಗುತ್ತಿದೆ. ಸಾಹಿತ್ಯದ ವೇದಿಕೆಗಳಲ್ಲಿ ಮಕ್ಕಳ ಸಾಹಿತ್ಯದ ಕುರಿತು ಮೆಚ್ಚುಗೆಯ ಮಾತನಾಡುವವರು ಅದಕ್ಕೆ ನ್ಯಾಯ ಒದಗಿಸಿತ್ತಿಲ್ಲ ಎಂದು ಅವರು ವಿಷಾದಿಸಿದರು. ಮೂಡಬಿದ್ರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಳುವಾಯಿ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಿ.ಕೆ.ಪಡಿವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಯುಗಪುರುಷದ ವತಿಯಿಂದ ಪಳಕಳರನ್ನು ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸನ್ಮಾನಿದರು. ಬೋಳಂತಕೋಡಿ ಸಾಹಿತ್ಯ ಪ್ರತಿಷ್ಟಾನದ ಕಿರಣ್ ನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಭುವನಾಭಿರಾಮ ಉಡುಪ ಅತ್ಯತ್ತಮ ಗ್ರಂಥಾಲಯ ಹೊಂದಿದ ಶಾಲೆಗಳಿಗೆ ಮಕ್ಕಳ ಪುಸ್ತಕಗಳನ್ನು ಒದಗಿಸುವುದಾಗಿ ಹೇಳಿದರು. ಉಪಾಧ್ಯಕ್ಷ ನವೀನ್ ಸಾಲ್ಯಾನ್ ಸ್ವಾಗತಿಸಿದರು. ಪ್ರೇಮಾಶ್ರೀ ವಂದಿಸಿದರು. ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Saturday, 17 March 2012

ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ನಮನ ಪರಂಪರೆ ಕೃತಿಯ ಲೋಕಾರ್ಪಣೆ

ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಬಂಗವಾಡಿ ಅರಮನೆಯ ಬಿ.ರವಿರಾಜ ಬಲ್ಲಾಳರು ತುಳು ಭಾಷೆಯಲ್ಲಿ ರಚಿಸಿರುವ ನಮನ ಪರಂಪರೆ ಎಂಬ ಗ್ರಂಥವನ್ನು  ಶ್ರೀ ಧ.ಮ.ಕಾಲೇಜಿನ ಪರಂಪರೆ ಕೂಟದ ಆಶ್ರಯದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ|| ಈ. ಮಹಾಬಲ ಭಟ್ ಅವರು ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಕೃತಿಕಾರ ಬಿ.ರವಿರಾಜ ಬಲ್ಲಾಳರನ್ನು ಯುಗಪುರುಷದ ವತಿಯಿಂದ ಕೊಡೆತ್ತೂರು ಭುವನಾಭಿರಾಮ ಉಡುಪರು ಸನ್ಮಾನಿಸಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ|| ವೈ.ಉಮಾನಾಥ ಶೆಣೈ ಸ್ವಾಗತಿಸಿ, ಅಂತಿಮ ಬಿ.ಎ. ವಿದ್ಯಾರ್ಥಿ ಮೋಹನ್ ಕುಮಾರ್  ಕಾರ್ಯಕ್ರಮ ನಿರ್ವಹಿಸಿದರು. ವಿವೇಕ್ ವಂದಿಸಿದರು.

Saturday, 25 February 2012

ಏಳಿಂಜೆ ಕೋಂಜಾಲು ಗುತ್ತುವಿನಲ್ಲಿ ನಾಗಮಂಡಲೋತ್ಸವ ಧಾರ್ಮಿಕ ಸಭೆ


 ಏಳಿಂಜೆ ಕೋಂಜಾಲು ಗುತ್ತು ಕುಟುಂಬಿಕರು ಆರಾಧಿಸಿಕೊಂಡು ಬಂದಿರುವ ನಾಗಬನದಲ್ಲಿ ಅಷ್ಠಪವಿತ್ರ ನಾಗಮಂಡಲೋತ್ಸವ ಶುಕ್ರವಾರ ನಡೆಯಿತು. ಏಳಿಂಜೆ ಗಣೇಶ ಭಟ್‌ರ ಪೌರೋಹಿತ್ಯದಲ್ಲಿ ಸಗ್ರಿ ಗೋಪಾಲಕೃಷ್ಣ ಸಾಮಗ, ಮದ್ದೂರು ಕೃಷ್ಣಪ್ರಸಾದ್ ವೈದ್ಯ ಮತ್ತು ಬಳಗದವರ ಸಹಯೋಗದಲ್ಲಿ ನಾಗಮಂಡಲೋತ್ಸವ ನಡೆಯಿತು
.


ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಆಶೀರ್ವಚನ ನೀಡಿದರು. ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಶುಭ ಸಂದೇಶ ನೀಡಿದರು. ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯ ಪಂಜ ಭಾಸ್ಕರ ಭಟ್ ನಾಗಾರಾಧನೆ ಕುರಿತು ಉಪನ್ಯಾಸ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ. ಅಭಯ ಚಂದ್ರ ಜೈನ್, ಮಾಜಿ ಸಚಿವರಾದ ಅಮರನಾಥ ಶೆಟ್ಟಿ, ಬಿ. ನಾಗರಾಜ ಶೆಟ್ಟಿ, ಮುಂಬೈನ ಉದ್ಯಮಿಗಳಾದ ಮನಮೋಹನ್ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ವಿವೇಕ್ ಶೆಟ್ಟಿ,  ಜಯ ಕೃಷ್ಣ ಶೆಟ್ಟಿ, ಪದ್ಮನಾಭ ಎಸ್. ಪೈಯಡೆ, ಸುಭಾಕರ ಹೆಗ್ಡೆ, ಮಹರಾಷ್ಟ್ರ ಪೊಲೀಸ್ ಇಲಾಖೆಯ ಪ್ರಕಾಶ್ ಭಂಡಾರಿ, ಬಿ.ಜೆ.ಪಿ. ನಾಯಕ ಕೆ.ಪಿ. ಜಗದೀಶ್ ಅಧಿಕಾರಿ, ಯುಗಪುರುಷದ ಸಂಪಾದಕ ಕೆ.ಭುವನಾಭಿರಾಮ ಉಡುಪ, ಏಳಿಂಜೆ ದೇವಳದ ಅರ್ಚಕ ಗಣೇಶ್ ಭಟ್, ಕೋಂಜಾಲು ಗುತ್ತುವಿನ ಭಾಸ್ಕರ ಶೆಟ್ಟಿ, ಜಯರಾಮ ಶೆಟ್ಟಿ, ದಿವಾಕರ ಶೆಟ್ಟಿ, ಪ್ರಭಾಕರ ಶೆಟ್ಟಿ, ದಯಾನಂದ ಶೆಟ್ಟಿ, ಶಿವರಾಮ ಶೆಟ್ಟಿ ಮತ್ತಿತರರಿದ್ದರು. ಏಳಿಂಜೆ ಅನಿಲ್ ಶೆಟ್ಟಿ ಸ್ವಾಗತಿಸಿ, ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು,
ಬೆಳಗ್ಗಿನಿಂದ ಸಾಂಸ್ಕೃತಿಕ ವೇದಿಕೆಯಲ್ಲಿ ಭಕ್ತಿ ಸಂಗೀತ ರಸಮಂಜರಿ, ಯಕ್ಷನಾದ ವೈಭವ, ಭರತನಾಟ್ಯ, ಮಿಮಿಕ್ರಿ, ಮತ್ತಿತರ ಕಾರ್ಯಕ್ರಮ ನಡೆದವು.

Tuesday, 7 February 2012

ಕೊಡೆತ್ತೂರಿನಲ್ಲಿ ಕೋರ್‍ದಬ್ಬು ದೈವದ ನೇಮ- ಸಂಮಾನ


`ಆದರ್ಶ ಬಳಗ ಕೊಡೆತ್ತೂರು' ಸಾಮಾಜಿಕವಾಗಿ, ಸಾಂಸ್ಕೃತಿಕವಾಗ ತಮ್ಮ ಗುರುತಿಸುವುದರ ಮೂಲಕ ಆದರ್ಶವಾಗಿ ಮುನ್ನಡೆಯುತ್ತಿದೆ' ಎಂದು ಸಾಂಸದ ನಳಿನ್ ಕುಮಾರ್ ಕಟೀಲ್‌ರವರು ಹೇಳಿದರು.
ಅವರು ಕೊಡೆತ್ತೂರು ಶ್ರೀ ಕೋರ್‍ದಬ್ಬು ದೈವದ ವಾರ್ಷಿಕ ನೇಮದ ಸಂದರ್ಭದಲ್ಲಿ ಜರಗಿದ ಆದರ್ಶ ಬಳಗ ಕೊಡೆತ್ತೂರು ಇದರ ವಾರ್ಷಿಕೋತ್ಸವ ಮತ್ತು ಸಂಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿಯವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳಾದ ಕ್ರೀಡಾಪಟು ರಿತೇಶ್ ಎಸ್. ಮತ್ತು  ವಿದ್ಯಾರ್ಥಿನಿ ಕು| ಅಶ್ವಿತಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು `ಯುಗಪುರುಷ'ದ ಕೊಡೆತ್ತೂರು ಭುವನಾಭಿರಾಮ ಉಡುಪ ವಹಿಸಿದ್ದರು. ದೇವಸ್ಯ ಮಠ
ಕೊಡೆತ್ತೂರು ಇದರ ಅರ್ಚಕರಾದ ಕೆ. ವೇದವ್ಯಾಸ ಉಡುಪ ಆಶೀವರ್ಚನ ನೀಡಿದರು. ದೇವಸ್ಯ ಕೆ.ವಿ. ಶೆಟ್ಟಿ ಇವರು ಸಂಮಾನಿತರನ್ನು ಅಭಿನಂದಿಸಿದರು.  ವೇದಿಕೆಯಲ್ಲಿ  ಕೊಡೆತ್ತೂರು ಗುತ್ತು ಗುತ್ತಿನಾರ್ ಸಂಜೀವ ಶೆಟ್ಟಿ, ಆದರ್ಶ ಬಳಗದ ಅಧ್ಯಕ್ಷ  ಶಾಂತಾರಾಮ ಕೋಟ್ಯಾನ್ ಉಪಸ್ಥಿತರಿದ್ದರು. ಹರೀಶ್ ಕೊಡೆತ್ತೂರು ಸಂಮಾನ ಪತ್ರ ವಾಚಿಸಿದರು. ದಾಮೋದರ ಶೆಟ್ಟಿ ಸ್ವಾಗತಿಸಿ, ತಾರಾನಾಥ ಶೆಟ್ಟಿ ವಂದಿಸಿದರು.


Monday, 6 February 2012

ಕಿನ್ನಿಗೋಳಿಯ ಯುಗಪುರುಷದಲ್ಲಿ ಅಂತರ್ ಜಿಲ್ಲಾ, ಅಂತರ್ ಶಾಲಾ ನಾಟಕೋತ್ಸವ -2012



 ಮಕ್ಕಳ ಸುಪ್ತ ಪ್ರತಿಭೆ ಪ್ರಕಾಶಕ್ಕೆ ಬರಲು ಇಂತಹ ನಾಟಕೋತ್ಸವ ಪೂರಕವಾಗಿದ್ದು, ವಿದ್ಯಾರ್ಥಿಗಳಿಗೆ ನಾಟಕದ ಕುರಿತು ಆಸಕ್ತಿ ಮೂಡಿಸಬೇಕೆಂದು ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.
ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಉಡುಪಿ, ಕಾಸರಗೋಡು, ದ.ಕ.ಜಿಲ್ಲಾ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಹಾಗೂ  ಯುಗಪುರುಷ ಕಿನ್ನಿಗೋಳಿ ಇದರ ಸಹಭಾಗಿತ್ವದಲ್ಲಿ ನಡೆದ ಅಂತರ್ ಜಿಲ್ಲಾ, ಅಂತರ್ ಶಾಲಾ ನಾಟಕತ್ಸವ-2012 ನ್ನು ಉದ್ಘಾಟಿಸಿ ಮಾತಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿದ್ದು ನಾಟಕಕಾರ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಪ್ರೊ.ಅನಂತಪದ್ಮನಾಭ ರಾವ್, ಕಾರ್‍ಯದರ್ಶಿ ಬಿ.ಶ್ರೀನಿವಾಸ ರಾವ್, ಕಾರ್ಯಕಾರಿ ಸಮಿತಿ ಸದಸ್ಯೆ ಸಾವಿತ್ರಿ ಎಸ್.ರಾವ್ ಉಪಸ್ಥಿತರಿದ್ದರು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಜಯರಾಮ ಪೂಂಜ ಕಾರ್ಯಕ್ರಮ ನಿರೂಪಿಸಿದರು. ಎಂಟು ಶಾಲಾ ಮಕ್ಕಳ ತಂಡದಿಂದ ನಾಟಕಗಳು ನಡೆದವು.


Saturday, 7 January 2012

ಕಿನ್ನಿಗೋಳಿ ಯುಗಪುರುಷದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ

ಜನವರಿ 7 ಕರಾಟೆ ಮನುಷ್ಯನ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಗೋಶಿಯನ್-ರ್‍ಯೂ-ಇಂಡಿಯನ್ ಕರಾಟೆ ಸಂಸ್ಥಯ ನೇತೃತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಸಂಸ್ಥೆಯಲ್ಲಿ 34ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸದಾನಂದ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಾಕ್ಷ ಹರಿಕೃಷ್ಣ ಪುನರೂರು, ಮಂಗಳೂರಿನ ರಾಜಗೋಪಾಲ ರೈ, ಮುಲ್ಕಿ ಸಿ.ಎಸ್.ಐ.ಯುನಿಟಿ ಚರ್ಚ್‌ನ ಧರ್ಮಗುರು ಸಂತೋಷ್ ಕುಮಾರ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಮೂಡಬಿದ್ರೆಯ ಸ್ಟೀಫನ್ ಮೆಂಡಿಸ್, ಚಂದ್ರಹಾಸ್ ಅಂಚನ್, ಮೋರ್ಗನ್ ವಿಲಿಯಂ ಮತ್ತಿತರರಿದ್ದರು. ಅರುಣಾ ರಾಜ್ ಪ್ರಾರ್ಥಿಸಿ, ಸಂಘಟಕ ಈಶ್ವರ್ ಕಟೀಲು ಸ್ವಾಗತಿಸಿದರು. ನಿತೇಶ್ ಎಕ್ಕಾರ್ ವಂದಿಸಿದರು. ಸಾಯಿನಾಥ್ ಶೆಟ್ಟಿ ಸನ್ಮಾನ ಪತ್ರವಾಚಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಮಟ್ಟದ 1200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಜನವರಿ 8ರಂದು ಸಮಾರೋಪ ಪ್ರಶಸ್ತಿ ವಿತರಣೆ ನಡೆಯಲಿದೆ.

Friday, 6 January 2012

ಯುಗಪುರುಷಕ್ಕೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ವಿ.ಸದಾನಂದ ಗೌಡರ ಭೇಟಿ- ಗೌರವ



ಕಿನ್ನಿಗೋಳಿಯ ಯುಗಪುರುಷ ಸಭಾಭವನದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಗೆ ಆಗಮಿಸಿದ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ವಿ.ಸದಾನಂದ ಗೌಡರನ್ನು ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪರು ಗೌರವಿಸಿದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ, ಸಂಸದ ಶ್ರೀ ನಳಿನ್‌ಕುಮಾರ್ ಕಟೀಲು, ಶಾಸಕರಾದ ಶ್ರೀ ಯೋಗೀಶ್ ಭಟ್, ಶ್ರೀ ಕೆ.ಅಭಯಚಂದ್ರ ಜೈನ್, ಶ್ರೀ ರಮಾನಾಥ ರೈ ಮುಂತಾದವರು ಉಪಸ್ಥಿತರಿದ್ದರು.

ಯುಗಪುರುಷಕ್ಕೆ ಕೋ.ಮ.ಕಾರಂತ ಪ್ರಶಸ್ತಿ


ನಿರಂತರ ಆರೂವರೆ ವರ್ಷಗಳಿಂದ ಸಾಹಿತ್ಯದ ಸೇವೆ ಸಲ್ಲಿಸುತ್ತಿರುವ ಯುಗಪುರುಷಕ್ಕೆ ಕುಂದಾಪುರದ ಕುಂದಪ್ರಭ ಸಂಸ್ಥೆಯವರು ವರ್ಷಂಪ್ರತಿ ನೀಡುವ ಕೋ.ಮ.ಕಾರಂತ ಪ್ರಶಸ್ತಿ ಲಭಿಸಿದೆ. ಜನವರಿ 1ರಂದು ಕುಂದಾಪುರದ ರೋಟರಿ ಲಕ್ಷ್ಮೀ ಕಲಾಮಂದಿರದಲ್ಲಿ ಜರಗಿದ ಸಮಾರಂಭದಲ್ಲಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ, ಕ.ಸಾ.ಪ.ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ಸಾಹಿತ್ಯ ಕೆ.ವಿ.ಕೃಷ್ಣಯ್ಯ, ದತ್ತಾನಂದ ಗಂಗೊಳ್ಳಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಬಿ.ಶಂಕರ ಶೆಟ್ಟಿ, ಹಿರಿಯ ಕಲಾವಿದ ಭೋಜ ಹಾಂಡ, ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ, ಕೋ.ರಮಾನಂದ ಕಾಮತ್, ಪಿ.ಜಯವಂತ ಪೈ ಮೊದಲಾದವರು ಉಪಸ್ಥಿತರಿದ್ದರು.