ಜನವರಿ 7 ಕರಾಟೆ ಮನುಷ್ಯನ ಮಾನಸಿಕ ಬೌದ್ಧಿಕ ಬೆಳವಣಿಗೆಗೆ ಪೂರಕ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಗೋಶಿಯನ್-ರ್‍ಯೂ-ಇಂಡಿಯನ್ ಕರಾಟೆ ಸಂಸ್ಥಯ ನೇತೃತ್ವದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಕರಾಟೆ ಸಂಸ್ಥೆಯಲ್ಲಿ 34ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಸದಾನಂದ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಾಕ್ಷ ಹರಿಕೃಷ್ಣ ಪುನರೂರು, ಮಂಗಳೂರಿನ ರಾಜಗೋಪಾಲ ರೈ, ಮುಲ್ಕಿ ಸಿ.ಎಸ್.ಐ.ಯುನಿಟಿ ಚರ್ಚ್‌ನ ಧರ್ಮಗುರು ಸಂತೋಷ್ ಕುಮಾರ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಮೂಡಬಿದ್ರೆಯ ಸ್ಟೀಫನ್ ಮೆಂಡಿಸ್, ಚಂದ್ರಹಾಸ್ ಅಂಚನ್, ಮೋರ್ಗನ್ ವಿಲಿಯಂ ಮತ್ತಿತರರಿದ್ದರು. ಅರುಣಾ ರಾಜ್ ಪ್ರಾರ್ಥಿಸಿ, ಸಂಘಟಕ ಈಶ್ವರ್ ಕಟೀಲು ಸ್ವಾಗತಿಸಿದರು. ನಿತೇಶ್ ಎಕ್ಕಾರ್ ವಂದಿಸಿದರು. ಸಾಯಿನಾಥ್ ಶೆಟ್ಟಿ ಸನ್ಮಾನ ಪತ್ರವಾಚಿಸಿದರು. ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಮಟ್ಟದ 1200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಜನವರಿ 8ರಂದು ಸಮಾರೋಪ ಪ್ರಶಸ್ತಿ ವಿತರಣೆ ನಡೆಯಲಿದೆ.
Saturday, 7 January 2012
Friday, 6 January 2012
ಯುಗಪುರುಷಕ್ಕೆ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ವಿ.ಸದಾನಂದ ಗೌಡರ ಭೇಟಿ- ಗೌರವ
ಕಿನ್ನಿಗೋಳಿಯ ಯುಗಪುರುಷ ಸಭಾಭವನದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಗೆ ಆಗಮಿಸಿದ ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ವಿ.ಸದಾನಂದ ಗೌಡರನ್ನು ಯುಗಪುರುಷದ ಪ್ರಧಾನ ಸಂಪಾದಕರಾದ ಕೊಡೆತ್ತೂರು ಭುವನಾಭಿರಾಮ ಉಡುಪರು ಗೌರವಿಸಿದರು. ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿ, ಸಂಸದ ಶ್ರೀ ನಳಿನ್‌ಕುಮಾರ್ ಕಟೀಲು, ಶಾಸಕರಾದ ಶ್ರೀ ಯೋಗೀಶ್ ಭಟ್, ಶ್ರೀ ಕೆ.ಅಭಯಚಂದ್ರ ಜೈನ್, ಶ್ರೀ ರಮಾನಾಥ ರೈ ಮುಂತಾದವರು ಉಪಸ್ಥಿತರಿದ್ದರು.
ಯುಗಪುರುಷಕ್ಕೆ ಕೋ.ಮ.ಕಾರಂತ ಪ್ರಶಸ್ತಿ
ನಿರಂತರ ಆರೂವರೆ ವರ್ಷಗಳಿಂದ ಸಾಹಿತ್ಯದ ಸೇವೆ ಸಲ್ಲಿಸುತ್ತಿರುವ ಯುಗಪುರುಷಕ್ಕೆ ಕುಂದಾಪುರದ ಕುಂದಪ್ರಭ ಸಂಸ್ಥೆಯವರು ವರ್ಷಂಪ್ರತಿ ನೀಡುವ ಕೋ.ಮ.ಕಾರಂತ ಪ್ರಶಸ್ತಿ ಲಭಿಸಿದೆ. ಜನವರಿ 1ರಂದು ಕುಂದಾಪುರದ ರೋಟರಿ ಲಕ್ಷ್ಮೀ ಕಲಾಮಂದಿರದಲ್ಲಿ ಜರಗಿದ ಸಮಾರಂಭದಲ್ಲಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಪ್ರಶಸ್ತಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕಾಸರಗೋಡು ಚಿನ್ನಾ, ಕ.ಸಾ.ಪ.ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ಸಾಹಿತ್ಯ ಕೆ.ವಿ.ಕೃಷ್ಣಯ್ಯ, ದತ್ತಾನಂದ ಗಂಗೊಳ್ಳಿ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಿರಣ್ ಮಂಜನಬೈಲು, ಕುಂದಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಬಿ.ಶಂಕರ ಶೆಟ್ಟಿ, ಹಿರಿಯ ಕಲಾವಿದ ಭೋಜ ಹಾಂಡ, ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ, ಕೋ.ರಮಾನಂದ ಕಾಮತ್, ಪಿ.ಜಯವಂತ ಪೈ ಮೊದಲಾದವರು ಉಪಸ್ಥಿತರಿದ್ದರು.
Subscribe to:
Posts (Atom)


