Thursday, 7 November 2013

ಕಿನ್ನಿಗೋಳಿ: ವಿದ್ವಾನ್ ಪೆರ್ಲ ಕೃಷ್ಣ ಭಟ್ಟ ಸಂಸ್ಮರಣೆ

ವಿದ್ವಾನ್ ಪೆರ್ಲ ಕೃಷ್ಣ ಭಟ್ಟರು ಸಂಸ್ಕೃತ ಮತ್ತು ಹಿಂದಿ ಭಾಷಾ ಪಂಡಿತರಾಗಿ, ಅಧ್ಯಾಪಕ, ಯಕ್ಷಗಾನ ಅರ್ಥಧಾರಿ, ಭಾಷಣಕಾರ, ಉತ್ತಮ ಲೇಖಕ, ಹಲವಾರು ಸಾಧನೆಗಳ ಸರದಾರರಾಗಿ ಯಕ್ಷಗಾನದ ಕಲಾಪ್ರಕಾರವಾದ ತಾಳಮದ್ದಲೆಗೆ ಗೌರವದ, ಪಾಂಡಿತ್ಯದ ಚೌಕಟ್ಟು ನೀಡಿ ಅಚ್ಚುಕಟ್ಟುತನ ಮೆರೆದ ಆದರ್ಶ ವ್ಯಕ್ತಿತ್ವ ಹೊಂದಿದವರು ಎಂದು ಪ್ರೋ. ಎಂ. ಲಕ್ಷ್ಮೀನಾರಾಯಣ ಸಾಮಗ ಹೇಳಿದರು.
ಶುಕ್ರವಾರ ಕಿನ್ನಿಗೋಳಿಯ ಯಗಪುರುಷ ಸಭಾಭವನದಲ್ಲಿ ಯಕ್ಷಲಹರಿ ಹಾಗೂ ಯುಗಪುರುಷ ಸಂಸ್ಥೆಗಳ ಸಹಯೋಗದಲ್ಲಿ ವಿದ್ವಾನ್ ದಿ| ಪೆರ್ಲ ಕೃಷ್ಣ ಭಟ್ಟರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಡಬಿದ್ರಿ ಧನಲಕ್ಷ್ಮೀ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಮಾಲಕ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಸಿಂಡಿಕೇಟ್ ಬ್ಯಾಂಕ್ ಪ್ರಬಂಧಕ ಕೆ. ಮಂಜುನಾಥ ಮಲ್ಯ, ಯಕ್ಷಲಹರಿಯ ಕಾರ್ಯದರ್ಶಿ ಶ್ರೀಧರ ಡಿ.ಎಸ್., ಉಪಸ್ಥಿತರಿದ್ದರು.
ಯಕ್ಷಲಹರಿಯ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು. ಯುಗಪುರುಷ ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಜಗದೀಶ್ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

ಸಂ.ಯ.ಮಂ. ಕೋಟೇಶ್ವರ ಅವರಿಂದ “ಸತ್ವ ಪರೀಕ್ಷೆ” ಎಂಬ ತಾಳಮದ್ದಲೆ ನಡೆಯಿತು. - See more at: http://nammakinnigoli.com/2013/11/02/kinnigoli-perla-krishna-bhat-sanmana/#sthash.MUQUhDZJ.dpuf
ಸಂ.ಯ.ಮಂ. ಕೋಟೇಶ್ವರ ಅವರಿಂದ “ಸತ್ವ ಪರೀಕ್ಷೆ” ಎಂಬ ತಾಳಮದ್ದಲೆ ನಡೆಯಿತು. - See more at: http://nammakinnigoli.com/2013/11/02/kinnigoli-perla-krishna-bhat-sanmana/#sthash.MUQUhDZJ.dpuf

ಕಿನ್ನಿಗೋಳಿಯಲ್ಲಿ ಯೋಗ ಶಿಬಿರ

ಆಧುನಿಕತೆಯ ಕಾಲಘಟ್ಟದಲ್ಲಿ ಆರೋಗ್ಯದ ರಕ್ಷಣೆಗೆ ಹಾಗೂ ದೈಹಿಕ ಮಾನಸಿಕ ಕ್ಷಮತೆಗೆ ಯೋಗ ಅತಿ ಮುಖ್ಯವಾಗಿದೆ, ಎಲ್ಲಾ  ಕಾಯಿಲೆಗಳಿಗೆ ಮದ್ದೆ ಮುಖ್ಯವಲ್ಲ ಯೋಗದಿಂದ ಗುಣಪಡಿಸಬಹುದು ಎಂದು ಯುಗಪುರುಷದ ಭುವನಾಭಿರಾಮ ಉಡುಪ ಹೇಳಿದರು. ಅವರು ಅ. ೨೧ ರಂದು ಯುಗಪುರುಷ ಸಭಾಭವನದಲ್ಲಿ ಪತಂಜಲಿ ಯೋಗ ಸಮಿತಿ ಮೂಲ್ಕಿ ಇವರಿಂಂದ ಉಚಿತ ಪ್ರಾಣಾಯಾಮ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ| ಅಲ್‌ಡ್ ಜೆ. ಪಿಂಟೋ, ಸಾಹಿತಿ ಕೆ| ಜಿ. ಮಲ್ಯ, ಕಟೀಲು ಪ. ಪೂ. ಕಾಲೇಜಿನ ಪ್ರಾಚಾರ್‍ಯ ಜಯರಾಮ ಪೂಂಜಾ, ಯೋಗ ಶಿಕ್ಷಕರಾದ ಶ್ರೀ ಎನ್. ಪಿ. ಶೆಟ್ಟಿ ಹಾಗೂ ಜಯ ಎಮ್. ಶೆಟ್ಟಿ ಕೆಂಚನಕೆರೆ, ವೈ. ಎನ್. ಸಾಲ್ಯಾನ್, ಶ್ರೀ ಕಾಂತ್ ಶೆಟ್ಟಿ , ರಾಜೇಂದ್ರ ಸ್ಟೀವನ್ ಸಿಕ್ವೇರಾ, ಪ್ರಕಾಶ್ ಶೆಟ್ಟಿ , ರಾಮಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಉಪನಾಸ್ಯಕಿ ಸುಧಾರಾಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಿನ್ನಿಗೊಳಿಯಲ್ಲಿ ಇನ್ನು ಅಚ್ಯುತದಾಸರ ನೆನಪು ಮಾತ್ರ...



ಯುಗಪುರುಷದಲ್ಲಿ 35 ವರ್ಷದಿಂದ ಹರಿಕಥಾ ಸಪ್ತಾಹ ನಡೆಸಿದ್ದರು.

ಕರಾವಳಿಯ ಭಾಗದ ಕಿನ್ನಿಗೋಳಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಕಳೆದ ೩೫ ವರ್ಷಗಳಿಂದ ನಿರಂತರವಾಗಿ ಸುಶ್ರಾವ್ಯವಾಗಿ ಕೀರ್ತನೆಗಳನ್ನೂ ದಾಸರ ಹಾಡುಗಳೊಂದಿಗೆ ರಾಮಾಯಣ, ಮಹಾಭಾರತ, ಸಾಮಾಜಿಕ ಕಥಾನಕಗಳನ್ನು ವಿಶಿಷ್ಠವಾಗಿ ತನ್ನ ವಾಕ್ಜರಿಯ ಮೂಲಕ ಪದ್ಯಗಳಿಂದ ಪಸರಿಸುತ್ತಿದ್ದ ಹರಿಕಥೆಯ ವಿದ್ವಾನ್ ಸಂತ ಭದ್ರಗಿರಿ ಅಚ್ಯುತದಾಸರು ಇನ್ನು ಕಿನ್ನಿಗೋಳಿ ಪರಿಸರಕ್ಕೆ ನೆನಪು ಮಾತ್ರ.
ಕಿನ್ನಿಗೋಳಿಯ ಸಾಂಸ್ಕೃತಿಕ ಕಲಾಕೇಂದ್ರವೆಂದೇ ಪ್ರಸಿದ್ಧಿ ಪಡೆದಿರುವ "ಯುಗಪುರುಷ" ಸಂಸ್ಥೆಯ ಸಂಯೋಜನೆಯಲ್ಲಿ ಸಂತ ಭದ್ರಗಿರಿ ಅಚ್ಯುತದಾಸರು ಹರಿಕಥೆಯ ಸಪ್ತಾಹವನ್ನು ಕಳೆದ ೩೫ ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ವಾರದ ಏಳೂ ದಿನದಲ್ಲಿ ಸಂಜೆಯ ಇಳಿ ಹೊತ್ತಿನಲ್ಲಿ ಪ್ರಾರಂಭವಾಗುತ್ತಿದ್ದ ಈ ಹರಿ ಕಥಾ ಕಾಲಕ್ಷೇಪಕ್ಕೆ ಅಸಂಖ್ಯಾತ ಅಭಿಮಾನಿಗಳು ಸೃಷ್ಟಿಯಾಗಿದ್ದರಲ್ಲದೇ ಯುಗಪುರುಷ ಸಭಾಭವನ ತುಂಬಿ ತುಳುಕುತ್ತಿತ್ತು ಎಂದು ಯುಗಪುರುಷದ ವ್ಯವಸ್ಥಾಪಕರಾದ ಕೊಡೆತ್ತೂರು ಭುವನಾಭಿರಾಮ ಉಡುಪರು ನೆನಪಿಸಿಕೊಳ್ಳುತ್ತಾರೆ.
ಪ್ರತೀ ವರ್ಷವು ನಡೆಸುವ ಈ ಹರಿಕಥೆಯ ಸಪ್ತಾಹಕ್ಕೆ ಬಹಳಷ್ಟು ಅಭಿಮಾನಿಗಳು ದೂರದ ಊರಿನಿಂದಲೂ ಆಗಮಿಸುತ್ತಿದ್ದರು. ದಿ.ಕೋ.ಅ.ಉಡುಪರು ಆರಂಭಿಸಿದ ಭದ್ರಗಿರಿ ಅಚ್ಯುತದಾಸರ ಈ ಹರಿಕಥಾ ಕಾಲಕ್ಷೇಪದ ಸಪ್ತಾಹವನ್ನು ಉಡುಪರ ಮಗನಾದ ಭುವನಾಭಿರಾಮ ಉಡುಪರು ಸಹ ಮುಂದುವರಿಸಿಕೊಂಡು  ಬಂದುದರಿಂದ ಈ ಭಾಗದಲ್ಲಿ ಕರಾವಳಿಯ ಏಕೈಕ ದಾಸರ ಕಥಾನಕಗಳನ್ನು ಆಸ್ವಾದಿಸುವ ಕೇಂದ್ರವಾಗಿ ಯುಗಪುರುಷ ಮೂಡಿಬಂದಿತು. ಹಾಗೂ ಅವರ ದಾಸರ ವಾಣಿಯನ್ನು ಆಲಿಸಲು ಅವಕಾಶವೂ ಒದಗಿತ್ತು. ಅಲ್ಲದೇ ದಿ.ಕೋ.ಅ.ಉಡುಪ ಸಂಸ್ಮರಣಾ ಪ್ರಶಸ್ತಿಯೂ ಸಹ ಅವರನ್ನು ಆವರಿಸಿಕೊಂಡಿದ್ದು ವಿಶೇಷ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಅಚ್ಯುತದಾಸರ ಅಭಿಮಾನಿ ಹರಿಕೃಷ್ಣ ಪುನರೂರು ಹೇಳುತ್ತಾರೆ.
ಪ್ರತೀ ವರ್ಷ ಸಪ್ತಾಹಕ್ಕೆ ಆಗಮಿಸುವ ಅಚ್ಯುತದಾಸರು ಕಿನ್ನಿಗೋಳಿ ಪರಿಸರದಲ್ಲಿಯೇ ಉಳಿದುಕೊಳ್ಳುತ್ತಿದ್ದರು. ಕಿನ್ನಿಗೋಳಿಯ ಪ್ರಸಿದ್ಧ ಜವಳಿ ವರ್ತಕ ಸಂಸ್ಥೆಯಾದ ಸಂಜೀವರಾವ್ ಅಂಡ್ ಸನ್ಸ್‌ರವರ ಯಶವಂತರಾವ್‌ರವರ ಮನೆಯಲ್ಲಿ ಹಾಗೂ ಕೆಲವೊಮ್ಮೆ ಮೂಡಬಿದಿರೆಯ ಬಳಿಯ ತಮ್ಮ ಮಗಳ ಮನೆಯಲ್ಲಿ ಉಳಿದುಕೊಂಡು ಸಪ್ತಾಹದ ಪ್ರತೀ ದಿನವು ನಿಷ್ಠೆಯಿಂದ ಸಮಯಕ್ಕೆ ಮಹತ್ವ ಕೊಟ್ಟು ಯುಗಪುರುಷಕ್ಕೆ ಆಗಮಿಸಿ ಹರಿಕಥೆಯನ್ನು ನಡೆಸುವ ಸಂಪ್ರದಾಯ ಬೆಳೆಸಿಕೊಂಡಿದ್ದರು.
ತಮ್ಮ ವಾಕ್ ಸಾiರ್ಥ್ಯ, ಸುಶ್ರಾವ್ಯ ಗೀತಾ ಪಠಣ, ಸಂಗೀತ, ಸಾಮಾಜಿಕ ಕಥಾನಕಗಳನ್ನು ಜೀವನದಲ್ಲಿನ ಕ್ಷಣಗಳಾಗಿ ಹಾಸ್ಯ ಚಟಾಕಿಗಳು, ಕೆಲವೊಮ್ಮೆ ರಾಜಕೀಯವನ್ನು ಹದವಾಗಿ ಬೆರೆಸುವ, ಕೊಂಕಣಿ, ತುಳು, ಕನ್ನಡ, ಮರಾಠಿಯ ಬಹುಭಾಷೆಯನ್ನು ಬೆರೆಸುವ ಗುಣ ವಿಶೇಷತೆ, ಪುರಾಣಗಳ ತಾತ್ವಿಕತೆ, ಜನರ ಮನಮುಟ್ಟುವ ಉಪಕಥೆಗಳು, ಅಚ್ಯುತದಾಸರ ಹರಿಕಥೆಯಲ್ಲಿ ಒಳಗೊಂಡಿದ್ದರಿಂದ ಎಲ್ಲಾ ವರ್ಗದ ಅಭಿಮಾನಿಗಳನ್ನು ಅವರು ಸೆಳೆದಿದ್ದರು.
ಭದ್ರಗಿರಿ ಅಚ್ಯುತದಾಸರ ಮೃತಕ್ಕೆ ಸಚಿವ ಅಬಯಚಂದ್ರ ಜೈನ್, ಸಂಸದ ನಳಿನ್‌ಕುಮಾರ್ ಕಟೀಲು, ಕಟೀಲು ದೇವಳದ ಪ್ರಧಾನ ಅರ್ಚಕ ಕೆ.ಲಕ್ಷ್ಮೀ ನಾರಾಯಣ ಆಸ್ರಣ್ಣ, ಹರಿಕೃಷ್ಣ ಪುನರೂರು, ಕೆ.ಭುವನಾಭಿರಾಮ ಉಡುಪ, ಯಕ್ಷಲಹರಿಯ ಇ.ಶ್ರೀನಿವಾಸ ಭಟ್, ವಿಜಯ ಕಲಾವಿದರ ಶರತ್ ಶೆಟ್ಟಿ, ಹಿರಿಯ ಸಾಹಿತಿ ಕೆ.ಜಿ.ಮಲ್ಯ, ಏಳಿಂಜೆ ಕೋಂಜಾಲುಗುತ್ತು ಅನಿಲ್ ಶೆಟ್ಟಿ, ದೇವಪ್ರಸಾದ್ ಪುನರೂರು ಇನ್ನಿತರ ಅಸಂಖ್ಯಾತ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ವರ್ದಂತ್ಯುತ್ಸವ

ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವಿರೇಂದ್ರ ಹೆಗ್ಗಡೆಯವರ ೪೬ ನೇ ಪಟ್ಟಾಭಿಷೇಕದ ವರ್ದಂತ್ಯುತ್ಸವದಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಟೀಲಿನ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರ ನೇತೃತ್ವದಲ್ಲಿ ವಿಶೇಷವಾಗಿ ಗೌರವಿಸಲಾಯಿತು. ಈ ಸಂದರ್ಭ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜೀ ಅಧ್ಯಕ್ಷ ಹರಿಕೃಷ್ಣ ಪುನರೂರು,ಯುಗಪುಷದ ಸಂಪಾದಕ ಭುವನಾಭಿರಾಮ ಉಡುಪ,ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್,ಮಟ್ಟಿ ಲಕ್ಷ್ಮಿನಾರಾಯಣ ರಾವ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಯುಗಪುರುಷ ದಸರಾ-ದೀಪಾವಳಿ ವಿಶೇಷಾಂಕ ಬಿಡುಗಡೆ

ಕಳೆದ 67ವರ್ಷಗಳಿಂದ ಕಿನ್ನಿಗೋಳಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ,  ಕರ್ನಾಟಕ ರಾಜ್ಯದ ಮಾಸಪತ್ರಿಕೆಗಳಲ್ಲಿ ಪ್ರಥಮ ಸ್ಥಾನದಲ್ಲಿರುವ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ "ಯುಗಪುರುಷ" ಕನ್ನಡ ಮಾಸ ಪತ್ರಿಕೆಯ ದಸರಾ-ದೀಪಾವಳಿ ವಿಶೇಷಾಂಕವನ್ನು  ಅಕ್ಟೋಬರ್ 14ರಂದು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಅಜಿತ್ ಕುಮಾರ್ ಶಾನಾಡಿಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಧಾನ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರು, ಹರಿನಾರಾಯಣ ಆಸ್ರಣ್ಣರು, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೆ. ಜಿ. ಮಲ್ಯ, ಎಂ.ಜೆ. ರಾವ್,  ಅಜಾರು ನಾಗರಾಜ ರಾಯ,  ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ನೆಲ್ಲಿತೀರ್ಥ ಗುಹಾಪ್ರವೇಶ, ತೀರ್ಥಸ್ನಾನ

ಶ್ರೀ ಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯದ ಗುಹಾಪ್ರವೇಶ, ತೀರ್ಥಸ್ನಾನವು ಬಗ್ಗಮಜಲು  ಸುಬ್ರಮಣ್ಯ ತಂತ್ರಿಗಳ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ ೧೭ರಂದು ಪ್ರಾರಂಭಗೊಂಡಿದೆ.
ಕಟೀಲು ದೇವಳದ ಅರ್ಚಕ ವೇದಮೂರ್ತಿ ಲಕ್ಷ್ಮೀನಾರಾಯಣ ಆಸ್ರಣ್ಣರು ದೀಪ ಬೆಳಗಿಸಿ ಗುಹಾಪ್ರವೇಶ ಹಾಗೂ ತೀರ್ಥಸ್ನಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ. ಸುಬ್ರಾಯ ಭಟ್, ಮುಂಬಯಿ ಉದ್ಯಮಿ ಡಿ. ಕೃಷ್ಣ ಶೆಟ್ಟಿ ಮುರ ಎಕ್ಕಾರು, ಮುಚ್ಚೂರು ಗ್ರಾಮ ಪಂಚಾಯತು ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಎನ್.ವಿ.ವೆಂಕಟ್ರಾಜ ಭಟ್, ಎನ್.ವಿ.ಜಿ.ಕೆ.ಭಟ್, ಶ್ರೀಪತಿ ಭಟ್ ಮುಂತಾದವರು ಉಪಸ್ಥಿತರಿದ್ದರು.

ಕಿನ್ನಿಗೋಳಿ ಯುಗಪುರುಷದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ನಡೆದ ಆರಾಧನಾ ಮಹೋತ್ಸವ -ರಥೋತ್ಸವ






ಆಧ್ಯಾತ್ಮ ಮತ್ತು ದೈವತ್ವ ತತ್ವಗಳು ಸಮಾಜಕ್ಕೆ ಆದರ್ಶಪ್ರಾಯವಾಗಿದ್ದು ಮಾನವ ಸಂತೃಪ್ತ ಜೀವನ ಸಾಗಿಸಲು ಸಹಕಾರಿ ಎಂದು ಕಿನ್ನಿಗೋಳಿ ಯಕ್ಷಲಹರಿಯ ಕಾರ್ಯದರ್ಶಿ ಶ್ರೀಧರ ಡಿ.ಎಸ್ ಹೇಳಿದರು.
ಬುಧವಾರ ಕಿನ್ನಿಗೋಳಿ ಯುಗಪುರುಷದ ಶ್ರೀಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ನಡೆದ ಆರಾಧನಾ ಮಹೋತ್ಸವ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿದರು.
ಸಾಂಪ್ರದಾಯಿಕ ಹಿರಿಯರು ನಡೆಸಿಕೊಂಡು ಬಂದಿರುವ ಧರ್ಮ ಶಿಸ್ತು ಸಂಸ್ಕಾರ ಸಂಸ್ಕೃತಿಗಳನ್ನು ಮುಂದುವರಿಸಿ, ಆಧ್ಯಾತ್ಮಿಕತೆಯಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಾದುದು ನಮ್ಮ ಆದ್ಯ ಕರ್ತವ್ಯ ಎಂದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನಗೈದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ನಿವೃತ್ತ ಉಪ ತಹಶೀಲ್ದಾರ್ ವೈ. ಯೋಗೀಶ್ ರಾವ್, ನಿವೃತ್ತ ಶಿಕ್ಷಕ ಸಾಹಿತಿ ಉಮೇಶ್ ರಾವ್ ಎಕ್ಕಾರು ಹಾಗೂ ಉದ್ಯಮಿ ಪ್ರಥ್ವಿರಾಜ ಆಚಾರ್ಯ ಉಪಸ್ಥಿತರಿದ್ದರು.