Thursday, 7 November 2013

ಯಕ್ಷಲಹರಿ - ಯುಗಪುರುಷ ತಾಳಮದ್ದಳೆ ಸಪ್ತಾಹ ಸಮಾರೋಪ ಸಮ್ಮಾನ


ಕಿನ್ನಿಗೋಳಿಯ 'ಯಕ್ಷಲಹರಿ - ಯುಗಪುರುಷ' ಹಾಗೂ ಕರ್ಣಾಟಕ ಬ್ಯಾಂಕ್ ವತಿಯಿಂದ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಆ. ೩ರಂದು ಯಕ್ಷಗಾನ ತಾಳಮದ್ದಳೆ ಸಪ್ತಾಹ ಹಾಗೂ ಸಮ್ಮಾನ ನಡೆಯಿತು.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಉಪ ಪ್ರಬಂಧಕ. ಕೆ. ಅನಿಲ್ ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕ್‌ನ ಮಹಾಪ್ರಬಂಧಕ ಜೈರಾಮ್ ಹಂದೆ ಅಧ್ಯಕ್ಷತೆ ವಹಿಸಿದ್ದರು. ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು.
ಸಮ್ಮಾನ, ಗೌರವಾರ್ಪಣೆ
ಯಕ್ಷಲಹರಿ ೨೩ನೇ ವರ್ಷದ ವಾರ್ಷಿಕೋತ್ಸವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದ ವಿಶ್ವನಾಥ ಅಡ್ಯಂತಾಯರಿಗೆ ಕಲಾವಿದ ಸಮ್ಮಾನ, ಮುಂಬಯಿ ಉದ್ಯಮಿ ಧನಪಾಲ ಶೆಟ್ಟಿ ತಾಳಿಪಾಡಿಗುತ್ತು ಅವರಿಗೆ ಕಲಾಪಷಕ ಸಮ್ಮಾನ ನಡೆಯಿತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ರೀಜನಲ್ ಮೆನೇಜರ್ ರಘುರಾಮ ಶೆಟ್ಟಿ, ಉದ್ಯಮಿ ರಮೇಶ್ ಎಲ್ ಕುಂದರ್, ವಿ೪ ಚಾನೆಲ್‌ನ ಲೋಲಾಕ್ಷ ಕರ್ಕೇರ ಅವರಿಗೆ ವಿಶೇಷ ಗೌರವಾರ್ಪಣೆ ನಡೆಯಿತು. ಧರ್ಮದರ್ಶಿ ಹರಿಕೃಷ್ಣ ಪುನರೂರು,  ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ, ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ, ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪೊ| ಎಂ. ಎಲ್. ಸಾಮಗ, ಕಟೀಲು ಪದವಿ ಕಾಲೇಜಿನ ಪ್ರಾಚಾರ್‍ಯ ಎಂ. ಬಾಲಕೃಷ್ಣ ಶೆಟ್ಟಿ, ವಿಶ್ವಬಂಟರ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅತ್ತೂರು ಬೈಲು ವೆಂಕಟ್ರಾಜ ಉಡುಪ, ಕಾವೂರು ದೇವಳ ಅರ್ಚಕ ಶ್ರೀನಿವಾಸ ಭಟ್ ಕಾವೂರು, ಮೂಡಬಿದಿರೆಯ ಉದ್ಯಮಿ ಶ್ರೀಪತಿ ಭಟ್, ನಾಗಪಾತ್ರಿ ಗೋಪಾಲಕೃಷ್ಣ ಸಾಮಗ, ರತ್ನಾ ಎಸ್. ಕೋಟ್ಯಾನ್, ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ರೋಟರಿ ಅಧ್ಯಕ್ಷ ರೋಬರ್ಟ್ ರೋಜಾರಿಯೋ, ಉಪಾಧ್ಯಕ್ಷ ಸತೀಶ್‌ರಾವ್ ಉಪಸ್ಥಿತರಿದ್ದರು.
ಕಾರ್ಪೊರೇಶನ್ ಬ್ಯಾಂಕ್‌ನ ಉಪ ಮಹಾಪ್ರಬಂಧಕ ಡಿ. ಎಂ. ಮುಜುಂದಾರ್ ವಿದ್ಯಾರ್ಥಿವೇತನ ವಿತರಿಸಿದರು. ಯಕ್ಷಲಹರಿ ಅಧ್ಯಕ್ಷ ಇ. ಶ್ರೀನಿವಾಸ ಭಟ್ ಸ್ವಾಗತಿಸಿದರು. ಯುಗಪುರುಷ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಪ್ರಸ್ತಾವನೆಗೈದರು. ಡಾ| ರಾಧಕೃಷ್ಣ ಭಟ್ ಪೆರ್ಲ ಹಾಗೂ ವಸಂತ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಧರ ಡಿ.ಎಸ್. ವಂದಿಸಿದರು.

No comments:

Post a Comment