ಕಳೆದ 67ವರ್ಷಗಳಿಂದ ಕಿನ್ನಿಗೋಳಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ, ಕರ್ನಾಟಕ ರಾಜ್ಯದ ಮಾಸಪತ್ರಿಕೆಗಳಲ್ಲಿ ಪ್ರಥಮ ಸ್ಥಾನದಲ್ಲಿರುವ, ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತ "ಯುಗಪುರುಷ" ಕನ್ನಡ ಮಾಸ ಪತ್ರಿಕೆಯ ದಸರಾ-ದೀಪಾವಳಿ ವಿಶೇಷಾಂಕವನ್ನು ಅಕ್ಟೋಬರ್ 14ರಂದು ಸೋಮವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಅಜಿತ್ ಕುಮಾರ್ ಶಾನಾಡಿಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ವಾಸುದೇವ ಆಸ್ರಣ್ಣ, ಪ್ರಧಾನ ಅರ್ಚಕರಾದ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣರು, ಹರಿನಾರಾಯಣ ಆಸ್ರಣ್ಣರು, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಕೆ. ಜಿ. ಮಲ್ಯ, ಎಂ.ಜೆ. ರಾವ್, ಅಜಾರು ನಾಗರಾಜ ರಾಯ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಉಪಸ್ಥಿತರಿದ್ದರು.
No comments:
Post a Comment