ಆಧುನಿಕತೆಯ ಕಾಲಘಟ್ಟದಲ್ಲಿ ಆರೋಗ್ಯದ ರಕ್ಷಣೆಗೆ ಹಾಗೂ ದೈಹಿಕ ಮಾನಸಿಕ ಕ್ಷಮತೆಗೆ ಯೋಗ ಅತಿ ಮುಖ್ಯವಾಗಿದೆ, ಎಲ್ಲಾ ಕಾಯಿಲೆಗಳಿಗೆ ಮದ್ದೆ ಮುಖ್ಯವಲ್ಲ ಯೋಗದಿಂದ ಗುಣಪಡಿಸಬಹುದು ಎಂದು ಯುಗಪುರುಷದ ಭುವನಾಭಿರಾಮ ಉಡುಪ ಹೇಳಿದರು. ಅವರು ಅ. ೨೧ ರಂದು ಯುಗಪುರುಷ ಸಭಾಭವನದಲ್ಲಿ ಪತಂಜಲಿ ಯೋಗ ಸಮಿತಿ ಮೂಲ್ಕಿ ಇವರಿಂಂದ ಉಚಿತ ಪ್ರಾಣಾಯಾಮ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ| ಅಲ್‌ಡ್ ಜೆ. ಪಿಂಟೋ, ಸಾಹಿತಿ ಕೆ| ಜಿ. ಮಲ್ಯ, ಕಟೀಲು ಪ. ಪೂ. ಕಾಲೇಜಿನ ಪ್ರಾಚಾರ್‍ಯ ಜಯರಾಮ ಪೂಂಜಾ, ಯೋಗ ಶಿಕ್ಷಕರಾದ ಶ್ರೀ ಎನ್. ಪಿ. ಶೆಟ್ಟಿ ಹಾಗೂ ಜಯ ಎಮ್. ಶೆಟ್ಟಿ ಕೆಂಚನಕೆರೆ, ವೈ. ಎನ್. ಸಾಲ್ಯಾನ್, ಶ್ರೀ ಕಾಂತ್ ಶೆಟ್ಟಿ , ರಾಜೇಂದ್ರ ಸ್ಟೀವನ್ ಸಿಕ್ವೇರಾ, ಪ್ರಕಾಶ್ ಶೆಟ್ಟಿ , ರಾಮಚಂದ್ರ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು. ಉಪನಾಸ್ಯಕಿ ಸುಧಾರಾಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

No comments:
Post a Comment