`ಆದರ್ಶ ಬಳಗ ಕೊಡೆತ್ತೂರು' ಸಾಮಾಜಿಕವಾಗಿ, ಸಾಂಸ್ಕೃತಿಕವಾಗ ತಮ್ಮ ಗುರುತಿಸುವುದರ ಮೂಲಕ ಆದರ್ಶವಾಗಿ ಮುನ್ನಡೆಯುತ್ತಿದೆ' ಎಂದು ಸಾಂಸದ ನಳಿನ್ ಕುಮಾರ್ ಕಟೀಲ್‌ರವರು ಹೇಳಿದರು.
ಅವರು ಕೊಡೆತ್ತೂರು ಶ್ರೀ ಕೋರ್‍ದಬ್ಬು ದೈವದ ವಾರ್ಷಿಕ ನೇಮದ ಸಂದರ್ಭದಲ್ಲಿ ಜರಗಿದ ಆದರ್ಶ ಬಳಗ ಕೊಡೆತ್ತೂರು ಇದರ ವಾರ್ಷಿಕೋತ್ಸವ ಮತ್ತು ಸಂಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿಯವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳಾದ ಕ್ರೀಡಾಪಟು ರಿತೇಶ್ ಎಸ್. ಮತ್ತು ವಿದ್ಯಾರ್ಥಿನಿ ಕು| ಅಶ್ವಿತಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು `ಯುಗಪುರುಷ'ದ ಕೊಡೆತ್ತೂರು ಭುವನಾಭಿರಾಮ ಉಡುಪ ವಹಿಸಿದ್ದರು. ದೇವಸ್ಯ ಮಠ
ಕೊಡೆತ್ತೂರು ಇದರ ಅರ್ಚಕರಾದ ಕೆ. ವೇದವ್ಯಾಸ ಉಡುಪ ಆಶೀವರ್ಚನ ನೀಡಿದರು. ದೇವಸ್ಯ ಕೆ.ವಿ. ಶೆಟ್ಟಿ ಇವರು ಸಂಮಾನಿತರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಕೊಡೆತ್ತೂರು ಗುತ್ತು ಗುತ್ತಿನಾರ್ ಸಂಜೀವ ಶೆಟ್ಟಿ, ಆದರ್ಶ ಬಳಗದ ಅಧ್ಯಕ್ಷ ಶಾಂತಾರಾಮ ಕೋಟ್ಯಾನ್ ಉಪಸ್ಥಿತರಿದ್ದರು. ಹರೀಶ್ ಕೊಡೆತ್ತೂರು ಸಂಮಾನ ಪತ್ರ ವಾಚಿಸಿದರು. ದಾಮೋದರ ಶೆಟ್ಟಿ ಸ್ವಾಗತಿಸಿ, ತಾರಾನಾಥ ಶೆಟ್ಟಿ ವಂದಿಸಿದರು.

No comments:
Post a Comment