ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ಬಂಗವಾಡಿ ಅರಮನೆಯ ಬಿ.ರವಿರಾಜ ಬಲ್ಲಾಳರು ತುಳು ಭಾಷೆಯಲ್ಲಿ ರಚಿಸಿರುವ ನಮನ ಪರಂಪರೆ ಎಂಬ ಗ್ರಂಥವನ್ನು ಶ್ರೀ ಧ.ಮ.ಕಾಲೇಜಿನ ಪರಂಪರೆ ಕೂಟದ ಆಶ್ರಯದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ|| ಈ. ಮಹಾಬಲ ಭಟ್ ಅವರು ಗ್ರಂಥವನ್ನು ಲೋಕಾರ್ಪಣೆ ಮಾಡಿದರು. ಕೃತಿಕಾರ ಬಿ.ರವಿರಾಜ ಬಲ್ಲಾಳರನ್ನು ಯುಗಪುರುಷದ ವತಿಯಿಂದ ಕೊಡೆತ್ತೂರು ಭುವನಾಭಿರಾಮ ಉಡುಪರು ಸನ್ಮಾನಿಸಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ|| ವೈ.ಉಮಾನಾಥ ಶೆಣೈ ಸ್ವಾಗತಿಸಿ, ಅಂತಿಮ ಬಿ.ಎ. ವಿದ್ಯಾರ್ಥಿ ಮೋಹನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿವೇಕ್ ವಂದಿಸಿದರು.

No comments:
Post a Comment