ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಹಾಗೂ ಸಂಜೀವನೀ ಟ್ರಸ್ಟ್ ಮುಂಬಯಿ ಹಾಗೂ ಕಟೀಲು ಶ್ರೀ ದುರ್ಗಾ ಸಂಸ್ಕೃತ ಪ್ರತಿಷ್ಠಾನದ ಆಶ್ರಯದಲ್ಲಿ ಜರಗಿದ ವಸಂತ ವೇದ ಶಿಬಿರದ ಉದ್ಘಾಟನೆಯನ್ನು ಇತ್ತೀಚೆಗೆ ಕಟೀಲು ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕುಂಭಾಶಿ ಆನೆಗುಡ್ಡೆ ದೇವಳದ ಅನುವಂಶೀಯ ಮೊಕ್ತೇಸರ ಡಾ|| ಸೂರ್ಯನಾರಾಯಣ ಉಪಾಧ್ಯಾಯರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಕಟೀಲು ದೇವಳದ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ಹರಿನಾರಾಯಣ ಆಸ್ರಣ್ಣ, ಸಂಜೀವನೀ ಟ್ರಸ್ಟ್‌ನ ಡಾ|| ಸುರೇಶ್ ರಾವ್, ಡಾ|| ನಾಗರಾಜ್, ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ, ಡಾ|| ಪದ್ಮನಾಭ ಮರಾಠೆ ಮುಂತಾದವರು ಉಪಸ್ಥಿತರಿದ್ದರು.

No comments:
Post a Comment