ಹಿಂದೂ ಸಂಪ್ರದಾಯದಲ್ಲಿ ತುಳಸೀಗೆ ಬಹು ಪ್ರಾಧಾನ್ಯತೆಯಿದೆ. ತುಳಸೀ ಆರೋಗ್ಯದಾಯಕ. ತುಳಸಿ ಮಹಿಮೆ ಅಪಾರ ಎಂದು ಖ್ಯಾತ ನ್ಯಾಯವಾದಿ, ಲೇಖಕ ಟಿ.ನಾರಾಯಣ ಪೂಜಾರಿಯವರು ಹೇಳಿದರು.
ಅವರು ಇತ್ತೀಚೆಗೆ ಮಂಗಳೂರಿನ ನೆಲ್ಲಿಕಾಯಿ ಮಠದಲ್ಲಿ ಕಿನ್ನಿಗೋಳಿ ಯುಗಪುರುಷ ಪ್ರಕಟಣಾಲಯದ 479ನೇ ಕೃತಿ ಬಿ.ಕೆ.ಶ್ರೀಮತಿ ರಾವ್‌ರವರಿಂದ ರಚಿತ ಶ್ರೀ ತುಳಸೀ ಮಾಹಿಮಾಮೃತ ಕೃತಿಯನ್ನು ಬಿಡುಗಡೆಗೊಳಿಸಿ ಮಾತಾಡಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಸಾಹಿತಿ ಪು.ಶ್ರೀನಿವಾಸ ಭಟ್, ಪೂರ್ಣ ಪ್ರಕಾಶರವರು ಉಪಸ್ಥಿತರಿದ್ದರು.
ಬಿ.ಕೆ.ಶ್ರೀಮತಿ ರಾವ್‌ರವರನ್ನು ಯುಗಪುರುಷದ ವತಿಯಿಂದ ಸನ್ಮಾನಿಸಲಾಯಿತು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸ್ವಾಗತಿಸಿದರು. ಬಿ. ಅಶ್ವತ್ಥಾಮ ರಾವ್, ಬಿ.ಶ್ರೀನಿವಾಸ ಮೂರ್ತಿಯವರು ಕಾರ್ಯಕ್ರಮ ನಿರೂಪಿಸಿದರು.ಐಶ್ವರ್ಯ ಎ.ರಾವ್ ಪ್ರಾರ್ಥಿಸಿದರೆ, ನಂದಿನಿ ಭಟ್ ಧನ್ಯವಾದವಿತ್ತರು.

No comments:
Post a Comment